ಕುಲಾಲ ಸಂಘ ಬೆಂಗಳೂರು ವತಿಯಿಂದ 75ನೆ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಅಂದ್ರಹಳ್ಳಿಯ ಶ್ರೀ ಮಂಜುನಾಥ ಸಭಾ ಭವನದ ಆವರಣದಲ್ಲಿ ಬೆಳಿಗ್ಗೆ 10.00 ಗಂಟೆಗೆ ಧ್ವಜಾರೋಹಣದೊಂದಿಗೆ ಆಚರಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಹಿರಿಯರು ಉಪಸ್ಥಿತರಿದ್ದರು. ಮಾಜಿ ಸೈನಿಕರಾದ ಶ್ರೀ K.M ಚಿನ್ನಪ್ಪ ಮಡಿಕೇರಿ, ಶ್ರೀ ಕೃಷ್ಣಪ್ಪ ಕಣ್ವ ತೀರ್ಥ ಮತ್ತು ಶ್ರೀ B ಮಾಧವ ಕುಲಾಲ್ ರವರು ಈ ಸಂದರ್ಭದಲ್ಲಿ ಮಾತನಾಡಿದರು. ಇತ್ತೀಚೆಗೆ ಸಂಘದ ಉಭಯ ಕಟ್ಟಡಗಳನ್ನು ಬಾಡಿಗೆ ನೀಡುವ ಸಂದರ್ಭದಲ್ಲಿ ಆಗಬೇಕಾಗಿದ್ದ ಕಾಮಗಾರಿಗಳನ್ನು ಸ್ವತಃ ಮುಂದೆ ನಿಂತು ಮುತುವರ್ಜಿ ವಹಿಸಿ, ಕೆಲಸ ಪೂರ್ತಿಯಾಗಲು ಸಹಕರಿಸಿದ ಶ್ರೀ ಯು.ಕಿಟ್ಟಣ್ಣ, ಶ್ರೀ ಸದಾನಂದ್ ಕುಲಾಲ್ ( ಶಬರಿ ಆರ್ಟ್ಸ್), ಶ್ರೀ ರಾಮ ಕುಲಾಲ್, ಶ್ರೀ ಮಧುಕಿರಣ್ ಚಂದ್ರಿಗೆ, ಶ್ರೀ ರೋಹಿತ್ ಬಂಗೇರಾ ಇವರನ್ನು ಗೌರವಿಸಲಾಯಿತು. ಸಂಘಟನಾ ಕಾರ್ಯದರ್ಶಿ ಶ್ರೀ ರಮಾನಾಥ್ ಎತಡ್ಕರವರು ಗೌರವರ್ಪಣೆ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು.

ನಂತರದಲ್ಲಿ ಕಾರ್ಯಕಾರಿ ಸಮಿತಿಯ ಮಾಸಿಕ ಸಭೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಚೆಂಡ್ಲಾ ಅವರ ಅಧ್ಯಕ್ಷತೆಯಲ್ಲಿ, ಸಂಘದ ಗೌರವಾಧ್ಯಕ್ಷರಾದ ಶ್ರೀ ಈಶ್ವರ್ ಮೂಲ್ಯ ಅವರ ಉಪಸ್ಥಿತಿಯಲ್ಲಿ ನಡೆಯಿತು. ಎಲ್ಲ ಪದಾಧಿಕಾರಿಗಳು ಮತ್ತು ಉಪ ಸಮಿತಿಗಳ ಸಂಚಾಲಕರುಗಳು ಅವರವರ ಕೆಲಸ ಕಾರ್ಯಗಳ ಬಗ್ಗೆ ಸಭೆಯಲ್ಲಿ ವಿಚಾರ ಮಂಡಿಸಿದರು.

ಜೊತೆ ಕಾರ್ಯದರ್ಶಿ ಶ್ರೀ ಆಶಾನಂದ್ ಕುಲಶೇಖರ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು..